ರೂಪಾ ಮಂಜರಿ ಇವರು ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಇವರ ಮಾತೃಭಾಷೆ ತಮಿಳು. ನಾನ್ (೨೦೧೨) ಮತ್ತು ಯಾಮಿರುಕ್ಕ ಬಾಯಾಮೆ (೨೦೧೪) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೊದಲು, ನಂದಿನಿ ಅವರ ಚಿತ್ರವಾದ ತಿರು ತಿರು ತುರು ತುರು (೨೦೦೯) ದಲ್ಲಿ ಪಾದಾರ್ಪಣೆ ಮಾಡಿದರು. == ವೃತ್ತಿಜೀವನ == ರೂಪಾ ಮಂಜರಿಯವರಿಗೆ ತಿರು ತಿರು ತುರು ತುರು ಚಿತ್ರದ ಆಡಿಷನ್‌ನಲ್ಲಿ ನಂದಿನಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು ಮತ್ತು ಆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಯು ದೊರೆಯಿತು. ಆಡಿಷನ್‌ಗೆ ಬಂದ ಇತರ ೩೦ ಕ್ಕೂ ಹೆಚ್ಚು ಹುಡುಗಿಯರಲ್ಲಿ ರೂಪಾ ಮಂಜರಿಯವರನ್ನು ಆಯ್ಕೆ ಮಾಡಲು ನಾಲ್ಕು ತಿಂಗಳು ಬೇಕಾಯಿತು. ರೊಮ್ಯಾಂಟಿಕ್ ಹಾಗೂ ಹಾಸ್ಯಮಯವಾದ ಈ ಚಿತ್ರದಲ್ಲಿ ಅವರಿಗೆ ಅಜ್ಮಲ್‌‌ರವರೊಂದಿಗೆ ಕಳೆದುಹೋದ ಮಗುವನ್ನು ಹುಡುಕುತ್ತಿರುವ ಪಾತ್ರ ದೊರೆಯಿತು. ರೂಪಾ ಅವರು ಅಭಿನಯದಲ್ಲಿ ಅತ್ಯುತ್ತಮ ನಟಿಗಾಗಿ ವಿಜಯ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ವಿಮರ್ಶಕರು ಅವರ ಅರ್ಚನಾ ಪಾತ್ರವನ್ನು- "ಕೋಪ, ಹಾಸ್ಯ, ಕೋಮಲತೆ ಮತ್ತು ಮೃದು ಪ್ರಣಯದ ಎಲ್ಲಾ ಸೂಕ್ಷ್ಮತೆಗಳೊಂದಿಗೆ ಜೀವಂತಗೊಳಿಸುತ್ತಾರೆ" ಎಂದು ಬಣ್ಣಿಸಿದರು. ತದನಂತರ, ಅವರು ಲಾಲ್‌ರವರು ನಿರ್ದೇಶಿಸಿ ನಿರ್ಮಿಸಿದ ೨೦೧೦ ರ ಮಲಯಾಳಂ ಚಿತ್ರ ಟೂರ್ನಮೆಂಟ್‌ನಲ್ಲಿ ಕಾಣಿಸಿಕೊಂಡರು. ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾದ ಪುರುಷರ ಗುಂಪನ್ನು ಭೇಟಿಯಾಗುವ ವನ್ಯಜೀವಿ ಛಾಯಾಗ್ರಾಹಕನ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರವು ನಕಾರಾತ್ಮಕ ವಿಮರ್ಶೆಗಳಿಗೆ ತೆರೆದುಕೊಂಡಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಕಳಪೆ ಪ್ರದರ್ಶನ ನೀಡಿತು. ಅವರು ದೀರ್ಘಕಾಲದಿಂದ ವಿಳಂಬವಾದ ವಿಜಯ್ ಆಂಟೋನಿಯವರ ಅಭಿನಯದ ನಾನ್ ಚಿತ್ರದಲ್ಲಿ ನೀಲಾ ನೀಲಾ ಹಾಡಲ್ಲಿ ಅಭಿನಯಿಸಿದರು ಮತ್ತು ಆನ್‌ಲೈನ್‌ನಲ್ಲಿ ಯಶಸ್ವಿಯಾಗಿ ಬಿಡುಗಡೆಯಾದ "ಮಕ್ಕಯಾಲ ಮಕ್ಕಯಾಲ" ಎಂಬ ಹಾಡಿನ ವೀಡಿಯೊದಲ್ಲಿ ಭಾಗಿಯಾಗಿದ್ದರು. ಈ ಚಿತ್ರವು ೨೦೧೦ ರ ಆರಂಭದಲ್ಲಿ, ನಿರ್ಮಾಣವನ್ನು ಪ್ರಾರಂಭಿಸಿತು ಮತ್ತು ೨೦೧೨ ರಂದು ಆನ್‌ಲೈನ್‌ನಲ್ಲಿ ಬಿಡುಗಡೆಯಾಯಿತು. ಈ ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ೨೦೧೨ ರಲ್ಲಿ, ಬಿಡುಗಡೆಯಾದ ಎರಡು ಮಲಯಾಳಂ ಚಿತ್ರಗಳಲ್ಲಿ ಮಲ್ಲು ಸಿಂಗ್‌‌ನಲ್ಲಿ ಕಾಣಿಸಿಕೊಂಡರು ಹಾಗೂ ಮಲಯಾಳಂ ಚಿತ್ರವಾದ ಐ ಲವ್ ಮಿಯಲ್ಲಿ ಸಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ೨೦೧೪ ರಲ್ಲಿ, ಅವರ ಮೊದಲ ಹಾಸ್ಯ-ಥ್ರಿಲ್ಲರ್ ಚಲನಚಿತ್ರವಾದ, ಯಾಮಿರುಕ್ಕ ಬಾಯಾಮೆ ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ರೂಪಾ ಮಂಜರಿಯವರು ತಮಿಳಿನ ಸಿವಪ್ಪು ಚಿತ್ರದಲ್ಲಿ ನಿರ್ಮಾಣ ಕಾರ್ಮಿಕನ ಪಾತ್ರವನ್ನು ನಿರ್ವಹಿಸಿದ್ದಾರೆ. == ಚಲನಚಿತ್ರಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿ == ಐ ಎಮ್ ಡಿ ಬಿನಲ್ಲಿ